Search This Blog

Monday, 20 February 2017

ಕೆ ಯಸ್ ಹೆಗ್ಡೆ ಆಸ್ಪತ್ರೆಯ ವೈದ್ಯರಿಂದ ರಿಕ್ಷಾ ಚಾಲಕರಿಗೆ ಪ್ರಥಮ ಚಿಕಿತ್ಸೆ ತರಬೇತಿ

ಕೆ ಯಸ್ ಹೆಗ್ಡೆ ಆಸ್ಪತ್ರೆಯ ವೈದ್ಯರಿಂದ ರಿಕ್ಷಾ ಚಾಲಕರಿಗೆ ಪ್ರಥಮ ಚಿಕಿತ್ಸೆ ತರಬೇತಿ

ದಕ್ಷಿಣ ಕನ್ನಡ ಜಿಲ್ಲಾಡಳಿತ, ಕುಡ್ಲ ಸೌಹಾರ್ದ ಸಹಕಾರಿ (ನಿ), ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಮತ್ತಿತರ ಸಂಸ್ಥೆಯ ಸಂಸ್ಥೆಗಳ ಸಂಯುಕ್ತ ಸಹಭಾಗಿತ್ವದಲ್ಲಿ 4.2.2017ರ ಶನಿವಾರದಂದು ದಕ್ಷಿಣ ಕನ್ನಡ ರಿಕ್ಷಾ ಚಾಲಕರ  ಸಂಘದ ಸದಸ್ಯರಿಗೆ ಪ್ರಥಮ ಚಿಕಿತ್ಸೆಯ ತರಬೇತಿ ನೀಡಲಾಯಿತು. ನಿಟ್ಟೆ ವಿಶ್ವ ವಿದ್ಯಾಲಯದ ಕ್ಷೇಮ ವೈದ್ಯಕೀಯ ವಿದ್ಯಾಲಯದ ಕೆ ಯಸ್ ಹೆಗ್ಡೆ ಆಸ್ಪತ್ರೆಯ ಅರಿವಳಿಕೆ ಶಾಸ್ತ್ರದ ಪ್ರಾಧ್ಯಾಪಕರಾದ ಡಾ ಶ್ರೀಪಾದ ಮೆಹೆಂದಳೆ, ಡಾ ಸುಮಲತಾ ಶೆಟ್ಟಿ ಹಾಗೂ ಇತರ ವೈದ್ಯರು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚಿನ ಸಂಖ್ಯೆಯ ರಿಕ್ಷಾ ಚಾಲಕರು ಪಾಲ್ಗೊಂಡು ತರಬೇತಿ ಪಡೆದರು. ಉರ್ವದ ರಾಧಾಕೃಷ್ಣ ಮಂದಿರದಲ್ಲಿ ನಡೆದ ಈ ಶಿಬಿರದಲ್ಲಿ, ಮಂಗಳೂರಿನ ಕಾರ್ಮಿಕ ಆಯುಕ್ತ ಶ್ರೀ ಮೈಲಾರಪ್ಪ, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಶ್ರೀ ಶಾಂತಾರಾಮ್ ಶೆಟ್ಟಿ, ಕಾರ್ಯದರ್ಶಿ ಡಾ ರಾಜೇಶ್ ಬಿ ವಿ, ಕುಡ್ಲ ಸೌಹಾರ್ದ ಸಹಕಾರಿ (ನಿ)ದ ಅಧ್ಯಕ್ಷ ಶ್ರೀ ಪ್ರಕಾಶ್ ವಿ, ಮುಂತಾದವರು ಉಪಸ್ಥಿತರಿದ್ದರು. 




No comments:

Post a Comment

Note: only a member of this blog may post a comment.