Search This Blog

Friday, 20 November 2020

ಕುಮಾರಿ ಡಿಂಪಲ್ ನಾಗರಾಜ್ ಶೇಟ್ ಇವರಿಗೆ ಜಪಾನ್ ಸರಕಾರದಿಂದ ಕೊಡಲ್ಪಡುವ MEXT Scholarship ಗೆ ಆಯ್ಕೆ.

ನಿಟ್ಟೆ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿನಿ ಕುಮಾರಿ ಡಿಂಪಲ್ ನಾಗರಾಜ್ ಶೇಟ್ ಇವರಿಗೆ ಜಪಾನ್ ಸರಕಾರದಿಂದ ಕೊಡಲ್ಪಡುವ MEXT Scholarship ಗೆ ಆಯ್ಕೆ. ಜಪಾನ್ ಸರಕಾರದ ಪ್ರತಿಷ್ಠಿತ ವಿದ್ಯಾರ್ಥಿ ವೇತನ "MEXT" ಗೆ ಆಯ್ಕೆಯಾದ ಮಂಗಳೂರಿನ ಕು || ಡಿಂಪಲ್ ನಾಗರಾಜ ಶೇಟ್ ರವರನ್ನು ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ತಾ.15-11-2020 ರಂದು ಮಂಗಳೂರಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸನ್ಮಾನಿಸಲಾಯಿತು. ಜಪಾನ್ ಸರಕಾರದ "M E X T" ಸ್ಕಾಲರ್ಶಿಪ್ ಜಾಗತಿಕ ಮಟ್ಟದ ಪ್ರತಿಷ್ಠಿತ ವಿದ್ಯಾರ್ಥಿವೇತನ ಎನಿಸಿಕೊಂಡಿದೆ. ಪರಿಚಯ : ಕುಮಾರಿ ಡಿಂಪಲ್ ನಾಗರಾಜ ಶೇಟ್, ಇವರು ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ "ನಿಟ್ಟೆ ವಿಶ್ವವಿದ್ಯಾಲಯದ" Centre For Science Education and Research ನಲ್ಲಿ ಅಧ್ಯಯನ ಮಾಡಿದ ಪ್ರತಿಭಾವಂತ ವಿದ್ಯಾರ್ಥಿನಿ. ಡಿಂಪಲ್ ಮಂಗಳೂರಿನ ಚಿನ್ನಾಭರಣ ಉದ್ಯಮಿ *ಶ್ರೀಮತಿ ರೂಪ ಮತ್ತು ಶ್ರೀ ನಾಗರಾಜ ಶೇಟ್ ಇವರ ಪುತ್ರಿ. ಇವರು ಜಪಾನ್ ಸರಕಾರದ ಸ್ಕಾಲರ್ಶಿಪ್ "M E X T" ಗೆ ಆಯ್ಕೆಯಾಗಿರುವ ಪ್ರತಿಭಾವಂತೆ. ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೆಎಂಸಿ ಕಾಲೇಜಿನಲ್ಲಿ ಖಿನ್ನತೆ ಮತ್ತು ಆತಂಕ ವಿಷಯದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ ಹಾಗೂ ಜಪಾನ್ ದೇಶದಲ್ಲಿ ಈ ಬಗ್ಗೆ P.hd ಮಾಡಲಿದ್ದಾರೆ. 'ವಿಕಲ ಚೇತನರಿಗೆ ಮೂಲಭೂತ ಸೌಲಭ್ಯ ದೊರಕಬೇಕು ಹಾಗೂ ಯುವ ಸಮುದಾಯ ಸಂಶೋಧನೆಯಲ್ಲಿ ತೊಡಗಬೇಕು' ಎನ್ನುವುದು ಅವರ ಆಶಯವಾಗಿದೆ. "M E X T" ವಿದ್ಯಾರ್ಥಿವೇತನದ ಮೂಲಕ ತಾವು ಭಾರತ ದೇಶವನ್ನು ಪ್ರತಿನಿಧಿಸುತ್ತಿರುವ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.





No comments:

Post a Comment

Note: only a member of this blog may post a comment.