Search This Blog
Tuesday, 8 November 2022
ಕೋಟಿ ಕಂಠ ಗಾಯನ | NUINS
ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಘಟಕವು ನಿಟ್ಟೆ ಫಾರ್ಮಸಿ ಕಾಲೇಜು ಎದುರು ಕೋಟಿ ಕಂಠ ಗಾಯನವನ್ನು ದಿನಾಂಕ 28-10-2022 ರಂದು ಆಯೋಜಿಸಿತ್ತು. ಕಾರ್ಯಕ್ರಮವು ಶ್ರೀಮತಿ ಸುಚಿತ್ರಾ, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ನಿಟ್ಟೆ ನರ್ಸಿಂಗ್ ಕಾಲೇಜು ಅವರ ಸ್ವಾಗತ ಭಾಷಣ ದೊಂದಿಗೆ ಪ್ರಾರಂಭವಾಯಿತು. ನಂತರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಹಚ್ಚೇವು ಕನ್ನಡದ ದೀಪ ಮತ್ತು ಹುಟ್ಟಿದರೆ ಕನ್ನಡ ನಾಡಲ್ಲಿಹುಟ್ಟಬೇಕು ಎಂಬ ಹಾಡುಗಳನ್ನು ಹಾಡಿದರು.
ನಿಟ್ಟೆ ಕಮ್ಯುನಿಕೇಷನ್ ಕಾಲೇಜು ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ.ತಪಸ್ವಿ ಪ್ರಮಾಣ ವಚನ ಬೋಧಿಸಿದರು. ನಿಟ್ಟೆ ವಿಶ್ವವಿದ್ಯಾಲಯ ವಿಜ್ಞಾನ, ಶಿಕ್ಷಣ ಮತ್ತು ಸಂಶೋಧನ ಕೇಂದ್ರದ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಶ್ರೀಮತಿ ರಮಾ ಅಡಿಗ ಧನ್ಯವಾದವನ್ನು ಪ್ರಸ್ತಾವಿಸಿದರು. ಈ ಸಂದರ್ಭದಲ್ಲಿ ನಿಟ್ಟೆ ಫಾರ್ಮಸಿ ಕಾಲೇಜು ಪ್ರಾಂಶುಪಾಲರಾದ ಡಾ.ಸಿ.ಎಸ್.ಶಾಸ್ತ್ರಿ, ನಿಟ್ಟೆ ಆರ್ಕಿಟೆಕ್ಚರ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನೋದ್ ಆರಾನ್ಹಾ, ನಿಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಫಾತಿಮಾ ಡಿಸಿಲ್ವಾ, ನಿಟ್ಟೆ ವಿಶ್ವವಿದ್ಯಾಲಯ ವಿಜ್ಞಾನ, ಶಿಕ್ಷಣ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ.ಅನಿರ್ಬನ್ ಚಕ್ರವರ್ತಿ, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಶಾಂತನು ಶಾ , ಶ್ರೀ ಸುಕೇಶ್, ಶ್ರೀ ಅನಿಲ್ ದೇವಾಡಿಗ ಉಪಸ್ಥಿತರಿದ್ದರು.
ಒಟ್ಟು 240 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Subscribe to:
Post Comments (Atom)
No comments:
Post a Comment
Note: only a member of this blog may post a comment.