ಪದವಿ ಪಡೆಯುವಲ್ಲಿ ವಿದ್ಯಾರ್ಥಿಗಳ ಶ್ರಮಕ್ಕೆ ಪೂರಕವಾಗಿ ಹೆತ್ತವರ ತ್ಯಾಗವೂ ಇದ್ದು, ಹಣದ ವಿಚಾರವಲ್ಲ ಬದಲಾಗಿ ಅದನ್ನು ಗಳಿಸಲು ಪಟ್ಟಂತಹ ಶ್ರಮದ ಚಿಂತನೆಯನ್ನು ಇಟ್ಟುಕೊಂಡು ಸದಾ ಸ್ಮರಿಸಿ ಕರ್ತವ್ಯ ಜೀವನದಲ್ಲಿ ಮುಂದುವರಿಯಬೇಕಿದೆ ಎಂದು ಬೆಲ್ಜಿಯಂನ ಎಸ್‌ಐಸಿಓಟಿ ಇದರ ಅಧ್ಯಕ್ಷ ಹಾಗೂ ಕೊಯಮತ್ತೂರು ಗಂಗಾ ಆಸ್ಪತ್ರೆಯ ಅಧ್ಯಕ್ಷ ಪ್ರೊ.ಯಸ್. ರಾಜಸೇಖರನ್ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಶನಿವಾರ ಜರಗಿದ ಏಳನೇ ವಾರ್ಷಿಕ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ನೆರವೇರಿಸಿದರು. ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಯ ಜತೆಗೆ ಅತ್ಯುತ್ತಮ ಬೋಧಕರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದಿರುವುದು ಎಲ್ಲರ ಅದೃಷ್ಟವಾಗಿದೆ. ಉತ್ತಮವಾದ ಗುರಿಯನ್ನಿಟ್ಟುಕೊಂಡು ಸರಿಯಾದ ಮಾರ್ಗದರ್ಶನದೊಂದಿಗೆ ಮುಂದುವರಿದಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ. ತಪ್ಪಿದಲ್ಲಿ ಸೋಲು ಖಂಡಿತವಾಗುತ್ತದೆ. ಗುರಿ ಮುಖ್ಯವಾಗಿರುತ್ತದೆ. ಉದ್ದೇಶಿತ ಗುರಿ ತಲುಪುವುದು ಮುಖ್ಯವಲ್ಲ, ಅಲ್ಲಿಗೆ ತಲುಪುವ ಪ್ರಯಾಣದಿಂದ ತೃಪ್ತಿ ಮತ್ತು ಸಂತಸವನ್ನು ಗಳಿಸಲು ಸಾಧ್ಯ. ಮಾಡುವ ಕೆಲಸವನ್ನು ಪ್ರೀತಿಸಿ, ಕೆಲಸದಿಂದ ಬೇಸರಗೊಂಡಿದ್ದಲ್ಲಿ ಒತ್ತಡಗಳಿಂದ ಕಾರ್ಯ ನಿರ್ವಹಿಸದೆ, ಇಚ್ಛಿಸುವ ಕ್ಷೇತ್ರದಲ್ಲಿ ಮುಂದುವರಿದಲ್ಲಿ ಯಶಸ್ವಿ ಸಾಧ್ಯ. ಜೀವನದಲ್ಲಿ ಉತ್ತಮ ಮಾರ್ಗದರ್ಶಕರನ್ನು ಆಯ್ದುಕೊಳ್ಳಿ, ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದವರಿಂದ ಸಿಗುವ ಜ್ಞಾನ ಜೀವನಕ್ಕೆ ದಾರಿದೀಪವಾಗಲು ಸಾಧ್ಯ ಎಂದರು.
ಸಮಾಜದಿಂದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಪಡೆದುಕೊಳ್ಳುತ್ತೇವೆ. ಅದಕ್ಕೆ ಪೂರಕವಾಗಿ ಪಡೆದುಕೊಂಡ ಜ್ಞಾನವನ್ನು ವೃದ್ಧಿಸಿ ಸಮಾಜದಲ್ಲಿ ನೊಂದವರ, ಬಡವರಿಗೆ ಸಹಕಾರವಾಗುವಂತೆ ಹಿಂತಿರುಗಿಸುವುದು ಎಲ್ಲರ ಆದ್ಯ ಕರ್ತವ್ಯ ಆಗಿರುತ್ತದೆ. ಇಲ್ಲವಾದಲ್ಲಿ ಪಡೆದ ಜ್ಞಾನ, ಪದವಿಯೂ ವ್ಯರ್ಥ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್ .ವಿನಯ ಹೆಗ್ಡೆ ಮಾತನಾಡಿ ಪದವಿ ಪಡೆದ ವಿದ್ಯಾರ್ಥಿಗಳು ಕಲಿತ ಶಿಕ್ಷಣ ಸಂಸ್ಥೆಯನ್ನು ಸ್ಮರಿಸುವುದರ ಜತೆಗೆ , ಬಹಳಷ್ಟು ಶ್ರಮವಹಿಸಿ, ತ್ಯಾಗದಿಂದ ಬೆಳೆಸಿದ ಹೆತ್ತವರನ್ನು ಗೌರವಿಸಬೇಕಿದೆ ಎಂದರು.
ಡಾಕ್ಟರ್ ಆಫ್ ಸೈನ್ಸ್ ಗೌರವ ಡಾಕ್ಟರೇಟನ್ನು ಅಂತಾರಾಷ್ಟ್ರೀಯ ಮಕ್ಕಳ ಸೀಳ್ದುಟಿ ಫೌಂಡೇಶನ್ನಿನ ಸ್ಥಾಪಕ ಜರ್ಮನಿಯ ಖ್ಯಾತ ಮೆಕ್ಸಿಲೋಫೇಷಿಯಲ್ ಸರ್ಜನ್ ಪ್ರೊ.ಹರ್ಮನ್.ಎಫ್.ಸೇಲರ್ ಮತ್ತು ಫಿಲಾಂತ್ರೋಫಿಸ್ಟ್ ಹಾಗೂ ಉದ್ಯಮಿ ಲಾಲ್‌ಚಂದ್ ಗಜ್ರಿಯಾ ಇವರಿಗೆ ಪ್ರಧಾನ ಮಾಡಲಾಯಿತು.
ಡಾ.ಎ.ಕೆ.ಮುನ್ಶೀ ಚಿನ್ನದ ಪದಕವನ್ನು ಎಂ.ಡಿಎಸ್ ನ ಡಾ.ಅನೀಷಾ ಕೇಶನ್, ಡಾ.ಯು.ಯಸ್.ಮೋಹನದಾಸ್ ನಾಯಕ್ ಮತ್ತು ನಿಟ್ಟೆ ವಿ.ವಿ ಚಿನ್ನದ ಪದಕವನ್ನು ಬೆಚ್ಯುಲರ್ ಆಫ್ ಡೆಂಟಲ್ ಸರ್ಜರಿ ವಿಭಾಗದ ಡಾ.ಕೊಂಗ್ ಶು ಫೆಯ್, ಶ್ರೀ ಮುಲ್ಕಿ ರಾಮಮೋಹನ್ ಅಡ್ಯಂತಾಯ ಹಾಗೂ ನಿಟ್ಟೆ ವಿ.ವಿ ಚಿನ್ನದ ಪದಕವನ್ನು ಬೆಚ್ಯುಲರ್ ಆಫ್ ಮೆಡಿಸಿನ್ ಮತ್ತು ಬೆಚ್ಯುಲರ್ ಆಫ್ ಸರ್ಜರಿ ವಿಭಾಗದ ಡಾ.ಶಿಫಾಲಿ ಪ್ರಭಾಕರ್, ಫಾರ್ಮಸಿಯ ಚೈತ್ರಾ .ಆರ್,.ಶೆಟ್ಟಿ, ಸೈನ್ಸ್ ಇನ್ ನರ್ಸಿಂಗ್ ನ ವಿನೀತಾ ಸನ್ನಿ, ಫಿಸಿಯೋಥೆರಪಿ ವಿಭಾಗದ ಸರಸ್ವತಿ ಶ್ರೇಷ್ಟ, ಬೆಚ್ಯುಲರ್ ಆಫ್ ಸೈನ್ಸ್ ನ ಕಾವ್ಯ ಧಿತಾಲ್ ನಿಟ್ಟೆ ವಿಶ್ವವಿದ್ಯಾನಿಲಯದ ಚಿನ್ನದ ಪದಕ, ಮಾಸ್ಟರ್ ಆಫ್ ಬಯೋಮೆಡಿಕಲ್ ಸೈನ್ಸ್ ವಿಭಾಗದ ಸೋನಂ.ಎನ್.ಕಿಲ್ಲೆ ಡಾ.ಇಂದ್ರಾಣಿ ಕರುಣಾಸಾಗರ್ ಚಿನ್ನದ ಪದಕ, ಕಲಾ ವಿಭಾಗದಲ್ಲಿ ಪತ್ರಿಕೋದ್ಯಮ ಮತ್ತು ಸಾಮೂಹಿಕ ಸಂವಹನ ವಿಭಾಗದ ರಿತಿಕಾ ರವೀಂದ್ರ ಪ್ರಭು, ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಯ ಅಥಿರಾ ರಾಜೀವ್ ನಿಟ್ಟೆ ವಿ.ವಿ ಚಿನ್ನದ ಪದಕಗಳನ್ನು ಪಡೆದುಕೊಂಡರು.

No comments:
Post a Comment
Note: only a member of this blog may post a comment.