Search This Blog

Sunday, 30 September 2018

ನಿಟ್ಟೆ ವಿಶ್ವವಿದ್ಯಾನಿಲಯದಿಂದ ಕೇರಳಕ್ಕೆ 40 ಲಕ್ಷ ಸಹಾಯಧನ - Press release

ಮಂಗಳೂರು: ಭೀಕರ ನೆರೆಗೆ ನಲುಗಿದ ಕೇರಳ ನೆರೆ ಸಂತ್ರಸ್ತರ ನೆರವಿಗೆ ನಿಟ್ಟೆ ವಿಶ್ವವಿದ್ಯಾನಿಲಯ ಆಗಮಿಸಿದ್ದು, ಬರೋಬ್ಬರಿ 40 ಲಕ್ಷ ರೂ‌. ಸಹಾಯಧನವನ್ನು ಹಸ್ತಾಂತರ ಮಾಡಿದೆ.


ಕೇರಳ ನೆರೆ ಸಂತ್ರಸ್ತರಿಗೆ ರೂ. 40 ಲಕ್ಷ ರೂ ಸಹಾಯಧನವನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ ಮುಖ್ಯಸ್ಥ ವಿಶಾಲ್ ಹೆಗ್ಡೆ ಕೇರಳದ‌ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಚೆಕ್ ಮೂಲಕ ಹಸ್ತಾಂತರಿಸಿದ್ದಾರೆ.
ಈ ಸಂದರ್ಭ ಸಚಿವ ಟಿ.ಪಿ ಜಯರಾಜನ್, PRO ಹೇಮಂತ್ ಶೆಟ್ಟಿ ಉಪಸ್ಥಿತರಿದ್ದರು.
ಕೊಡಗಿಗೂ 40 ಲಕ್ಷ ಹಸ್ತಾಂತರಿಸಿದ್ದ ಸಂಸ್ಥೆ
ಇನ್ನು ಕೊಡಗಿನ ನೆರೆ ಸಂತ್ರಸ್ತರ ನೆರವಿಗೂ ಆಗಮಿಸಿದ್ದ ನಿಟ್ಟೆ ಸಂಸ್ಥೆ, 40 ಲಕ್ಷ ಸಹಾಯಧನವನ್ನು ಸಿಎಂ ಪರಿಹಾರ ನಿಧಿಗೆ ನೀಡಿತ್ತು. ಮಂಗಳೂರಿಗೆ ಸಿಎಂ ಕುಮಾರಸ್ವಾಮಿ ಆಗಮಿಸಿದ್ದ ವೇಳೆ ವಿಶಾಲ್ ಹೆಗ್ಡೆಯವರೇ ಸಿಎಂಗೆ ಚೆಕ್ ಹಸ್ತಾಂತರ ಮಾಡಿದ್ದರು.












Published in http://megamedianews.com



No comments:

Post a Comment

Note: only a member of this blog may post a comment.