ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಏಳು ದಿನಗಳ ಪರ್ಯಂತ ಮೂಡುಬೆಳ್ಳೆ ಸೈಂಟ್ ಲಾರೆನ್ಸ್ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದು, ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾವಸರದಲ್ಲಿ ದಿನದ ಆಚರಣೆ ಮತ್ತು ಮಹತ್ವದೊಂದಿಗೆ ಸಮಾಪನಗೊಂಡಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಳ್ಳೆ ಗ್ರಾ.ಪಂ. ಉಪಾಧ್ಯಕ್ಷ ಶಶಿಧರ ವಾಗ್ಲೆ, ಮಹಿಳಾ ಶಿಬಿರಾರ್ಥಿಗಳಿಗೆ ದಿನಾಚರಣೆಯ ಶುಭಾಶಯಗಳನ್ನು ಹಾರೈಸಿ ಮಾತನಾಡಿ, ಈಗ ಪರಿಸರ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡುತ್ತಿದ್ದು, ಪ್ರತೀ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್‌ಎಲ್‌ಆರ್‌ಎಂ ಘಟಕಗಳಿದ್ದು, ಪ್ರತೀ ಮನೆಗೆಳಿಂದ ತ್ಯಾಜ್ಯಗಳನ್ನು ಸಂಗ್ರಹಿಸಿ ಮರುಬಳಕೆಗೆ ಕಳುಹಿಸುತ್ತಿದೆ.
ಇದರಿಂದ ಈ ವ್ಯವಸ್ಥೆ ಇದ್ದುದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಆಗುತ್ತಿದೆ. ಎನ್‌ಎಸ್‌ಎಸ್ ಸ್ವಯಂ ಸೇವಕರೂ ಸ್ವಚ್ಛತೆಯ ಕಡೆಗೆ ಗಮನ ನೀಡುತ್ತಿದ್ದು,ಈ ಬಗ್ಗೆ ಜನಜಾಗೃತಿ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಸ್ಥಳೀಯ ಗಣ್ಯರಾದ ರಾಬರ್ಟ್ ಮಾರ್ಟಿಸ್, ವೀರಾ ಫರ್ನಾಂಡಿಸ್, ಲೀನಾ ಡಯಾಸ್ ಭಾಗವಹಿಸಿ ಶುಭ ಹಾರೈಸಿದರು. ಮಹಿಳಾ ದಿನಾಚರಣೆಯ ಪ್ರಯುಕ್ತ ಶಿಕ್ಷಕಿಯರಾದ ವೀರಾ ಫೆರ್ನಾಂಡಿಸ್ ಮತ್ತು ಲೀನಾ ಡಯಾಸ್ ಅವರನ್ನು ಅಭಿನಂದಿಸಲಾಯಿತು.
ಅಕ್ವಿನ್ ಡಿಸೋಜ ಏಳು ದಿನಗಳ ಶಿಬಿರದ ಸಂಕ್ಷಿಪ್ತ ವರದಿ ವಾಚಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸರಿತಾ ಫರ್ನಾಂಡಿಸ್, ಸುಕೇಶ್ ಕೀರ್ತಿಮಾಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮನೀಷಾ ವಂದಿಸಿದರು.
No comments:
Post a Comment
Note: only a member of this blog may post a comment.